ಮಧುವನ ಕರೆದರೆ

ಏರಡು ವಾರಗಳ ಹಿಂದಿನ ಕಥೆ. ಶನಿವಾರ. ವಾರಂತ್ಯ. ವಾರವೆಲ್ಲ ಕಷ್ಟ ಪಟ್ಟಿರುವೆ ಅಂತ ನನ್ನ ಬಗ್ಗೆ ನಾನೆ ಕನಿಕರ ತೋರಿಕೊಳ್ಳುತ್ತಾ, ಕನಿಷ್ಟ ಹತ್ತು ತಾಸು ನಿದ್ದೆ ತೆಗಿಲೇಬೇಕಂತ ಮಲಗಿದ್ದೆ. ಹಾಳದ ಕನಸುಗಳು. ರಾತ್ರಿ ೨.೩೦ಗೆ ಎಚ್ಚರವಾಯಿತು. ಎಷ್ಟು ಪ್ರಯತ್ನ ಮಾಡಿದರೂ ನಿದ್ದೆ ಇಲ್ಲ. ಇನ್ನು ಹೊರಳಾಡಿದರೆ ನನ್ನ ಹೆಂಡತ್ತಿನೂ ಎದ್ದು ಸಹಸ್ರನಾಮ ಮಾಡ್ತಾಳೆ ಅಂತ ಎದ್ದು ಲೀವಿಂಗ್ ರೂಮಿಗೆ ಬಂದೆ. ಟೀವಿ ಬೋರು. ಒಂದಿಷ್ಟು ಕನ್ನಡ ಹಾಡುಗಳನ್ನಾದರೂ ಕೇಳೋಣ ಅಂತ ಲ್ಯಾಪ್‌ಟಾಪ್ ತೋಡೆಗೇರಿಸಿ ಕಿವಿಗೆಗೆ ಹೆಡ್‌ಫೋನ್ ಸಿಗಿಸಿಕೋಂಡು ಕನ್ನಡ ಆಡಿಯೂ ತಾಣಕ್ಕೆ ಹೋದೆ. ಹಂಗೆ ಹುಡುಕ್ತಾ ಹುಡುಕ್ತಾ "ಇಂತಿ ನಿನ್ನ ಪ್ರೀತಿಯ" ಚಿತ್ರದ "ಮಧುವನ ಕರೆದರೆ" ಹಾಡು ಕೇಳಿದೆ. ಆಹಾ! ಎಂಥ ಹಾಡು. ನನಗೆ ತರತರವಾರಿ ಸಂಗೀತ ಪ್ರಾಕಾರಗಳು ಇಷ್ಟ. ಆದರೆ ಒಂದು ಒಳ್ಳೆ ಕನ್ನಡ ಹಾಡು ಕೇಳಿದಷ್ಟು ತೃಪ್ತಿ, ಸಮಧಾನ ಇನ್ನ್ಯಾವ ಹಾಡು ಕೇಳಿದ್ರೂ ಸಿಗೊಲ್ಲ. ಕಣ್ಣು ಮುಚ್ಕೊಂಡು ಜಯಂತ ಕಾಯ್ಕಣಿ ಬರೆದ ಸಾಲುಗಳನ್ನು ಚಿನ್ಮಯಿ ಧ್ವನಿಯಲ್ಲಿ ಕೇಳ್ತಾ ಎಲ್ಲೋ ಕಳೆದು ಹೋದೆ. ಸಾಧು ಕೋಕಿಲ ಎಂಥಾ ಒಳ್ಳೆ ಸಂಗೀತ ಕೊಟ್ಟಿದ್ದಾರೆ!. ಸತ್ಯ ಹೇಳಬೇಕೆಂದರೆ ಸಾಧು ಕೋಕಿಲರವರ ಸಂಗೀತದ ಬಗ್ಗೆ ನನಗೇನು ಅಷ್ಟು ಒಳ್ಳೆ ಅಭಿಪ್ರಾಯವಿರಲಿಲ್ಲ. ಆದರೆ ಈ ಹಾಡು ಕೇಳಿದ ನಂತರ ನನ್ನ ನಿಲುವು ಬದಲಾಗಿದೆ. ಈ ಹಾಡು ವಿರಳವಾಗಿ ಕಾಣಸಿಗುವ ಸಂಗೀತ ಮತ್ತು ಸಾಹಿತ್ಯದ ಹದವಾದ ಮಿಶ್ರಣ. ಜಯಂತ ಕಾಯ್ಕಣಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಮತ್ತು ಅನುಕರಣೀಯ. ಶರಣಾದೆ.. ಸೆರೆಯಾದೆ.

Comments

Anonymous said…
Dear Chandrakanth,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.
Unknown said…
ಪ್ರಿಯ ಆತ್ಮೀಯ ಸ್ನೇಹಿತರೆ,

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
Unknown said…
tappu tili bedi sir...
RUDALI anta ondu hindi film ide tumba famous film adu adra "dil gum gum kare gabraye..." adra full template e song... tumba chnagide... changi kannada hadige ala vadisidare nama kokila avru..
kalsakri said…
dil gum gum kare gabraye... ದ ಛಾಯೆಯ
ಬಗೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಈ ಹಾಡು
ನಮಸ್ತೆ ಲಂಡನ್ ಚಿತ್ರದ ಅನುಕರಣೆಯಂತೆ . ಏನೇ ಇರಲಿ ತುಂಬ ಚೆನ್ನಾಗಿದೆ.

Popular posts from this blog

ನಮ್ಮೂರು ಬೆಂಗಳೂರು

ಇಸ್ರೋ ಕನ್ನಡ ತಾಣ