ನಮ್ಮೂರು ಬೆಂಗಳೂರು

ಬ್ರಿಟೀಷ್ ಆಳ್ವಿಕೆಯಡಿ ಇಂಗ್ಲಿಷಿನಲ್ಲಿ ಬ್ಯಾಂಗಲೋರ್ ಎಂದು ಅಪಭ್ರಂಶಗೊಂಡಿದ್ದ ಬೆಂಗಳೂರು ನಗರದ ಹೆಸರನ್ನು ಸರಿಪಡಿಸುವ ನಿಟ್ಟಿನೆಡೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮ ಸರಿ ಎಂದು ನನ್ನ ಅನಿಸಿಕೆ. ಕೆಲವು ಇಂಗ್ಲಿಷ್ ಮಾಧ್ಯಮಗಳಲ್ಲಿ (ಟಿವಿ ಮತ್ತು ಪತ್ರಿಕೆ) ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದನ್ನು ಬಿತ್ತರಿಸಲಾಯಿತು. ಅಕ್ಷೇಪ ವ್ಯಕ್ತಪಡಿಸಿದವರಲ್ಲಿ ಸುಮಾರು ಜನ ಈ ನಾಡಿನಲ್ಲಿ ಹುಟ್ಟಿಬೆಳೆಯದ ಮತ್ತು ಬೆಂಗಳೂರು ಎಂದು ಸರಿಯಾಗಿ ಉಚ್ಚರಿಸಲೂ ಬಾರದ ವಲಸಿಗರು . ಇಂದಿಗೂ ಕರ್ನಾಟಕದ ಜನತೆ ಮತ್ತು ದಕ್ಷಿಣ ಭಾರತದ ಹಲವಾರು ಕನ್ನಡೇತರ ಜನರು ನಗರವನ್ನೂ ಬೆಂಗಳೂರೆಂದೇ ಸಂಭೋಧಿಸುತ್ತಾರೆ. ಬೆಂಗಳೂರಿನ ಕನ್ನಡಕಿಂತ ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುವ ಐಟಿ ಜನತೆ ಕೂಡ ಇಂಗ್ಲಿಷಿನಲ್ಲಿ ಮಾತನಾಡುವಾಗ ಬ್ಯಾಂಗಲೋರ್ ಅಂದರೂ ಕನ್ನಡದಲ್ಲಿ ಮಾತನಾಡುವಾಗ ಬೆಂಗಳೂರು ಎಂದೆ ಕರೆಯುವುದನ್ನು ಗಮನಿಸಿರುವೆ.

ಕೆಲವು ಸಂಶಯವಾದಿಗಳು ಇದು ಅತಿರೇಕದ ಭಾಷಾಭಿಮಾನ (ಲಿಂಗ್ವಿಸ್ಟಿಕ್ ಶೊವನಿಸಮ್) ಎಂದು ಅರ್ಥೈಸಿಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಾನು ಹೇಳುವುದಿಷ್ಟೆ. ನಾಳೆ ಯಾರಾದರೂ ನಿಮ್ಮ ಹೆಸರನ್ನು ತಪ್ಪಾಗಿ ಉಚ್ಚರಿಸುತ್ತಿದ್ದರೆ ನೀವು ನಿಮ್ಮ ಹೆಸರನ್ನು ಅವರಿಗೆ ಸರಿಹೊಂದುವಂತೆ ಬದಲಾಯಿಸುವಿರಾ? ಸರಿಯಾದ ಉಚ್ಚರಣೆ ಮಾಡಲು ನೀವು ಕ್ರಮ ಕೈಗೊಂಡರೆ ಅದನ್ನು ಅತಿರೇಕದ ನಾಮಾಭಿಮಾನ ಎಂದರೆ ಸಹಿಸುವಿರಾ?
ಬ್ಯಾಂಗಲೋರ್ ಎಂಬ ಹೆಸರು ೨೦೦ ಚಿಲ್ಲರೆ ವರ್ಷಗಳಿಂದ ಕೆಲ ಜನರಲ್ಲಿ ಮಾತ್ರ ಬಳಕೆಯಲ್ಲಿರುವುದು ಆದರೆ ಅದಕ್ಕಿಂತ ಹೆಚ್ಚಿನ ಕಾಲ ಮತ್ತು ಹೆಚ್ಚಿನ ಜನರ ಬಾಯಲ್ಲಿ ಬೆಂಗಳೂರು ಎಂಬ ಹೆಸರು ಪ್ರಚಲಿತದಲ್ಲಿರುವ ವಿಷಯ ಈ ಕ್ರಮ ವಿರೋಧಿಸುವ ಹಲವರಿಗೆ ತಿಳಿದೇ ಇಲ್ಲ ಅನ್ನಿಸುತ್ತದೆ. ಅನೇಕ ಬುದ್ದಿಜೀವಿಗಳೂ ಎನ್ನಿಸಿಕೊಂಡ ಮಹಾತ್ಮರು (ರಾಮಚಂದ್ರ ಗುಹಾ, ಎಂ. ಎಸ್. ಸತ್ಯು ಇತ್ಯಾದಿ) ಇದು ಅತಿರೇಕದ ಭಾಷಾಭಿಮಾನವಲ್ಲ ಎಂದು ಈ ಕ್ರಮಕ್ಕೆ ತಮ್ಮ ತತಾಸ್ಥು ನೀಡಿರುವುದು ನಮ್ಮ ಅದೃಷ್ಟ. ಈ ಕ್ರಮ ಕೈಗೊಳ್ಳಲು ಸಲಹೆ ಕೊಟ್ಟವರೂ ಕೂಡ ಅವರಲೂಬ್ಬರಾದ ಡಾ. ಯು ಆರ್ ಅನಂತಮೂರ್ತಿ. (ಸೂ. ಅನಂತಮೂರ್ತಿಯವರು ನಿಜವಾದ ಬುದ್ದಿಜೀವಿಗಳು ಎಂಬುದು ನನ್ನ ವ್ಯಂಗ್ಯವಿಲ್ಲದ ಪ್ರಾಮಾಣಿಕ ಅನಿಸಿಕೆ)

ಕೆಲವರು ಈ ಲೆಕ್ಕಾಚಾರದಂತೆ, ಮ್ಯಾಂಗಲೋರ್ ಮಂಗಳೂರು ಆಗಬೇಕು, ಬೆಳಗಾಂ ಬೆಳಗಾವಿ ಆಗಬೇಕು, ಶಿಮೊಗ ಶಿವಮೊಗ್ಗವಾಗಬೇಕು ಎಂಬ ವಾದ ಮುಂದಿಟ್ಟು, ಹೀಗೆ ಹೆಸರು ಬದಲಾವಣೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಮ್ಮ ಒಣ ತರಲೆ ಬುತ್ತಿ ಬಿಚ್ಚಿದ್ದಾರೆ. ಅವರಿಗೆ ನಾನು ಹೇಳುವುದಿಷ್ಟೆ. ಆಯ್ತು ಸ್ವಾಮಿ ಸಧ್ಯಕ್ಕೆ ಬೆಂಗಳೂರು ಹೆಸರನ್ನು ಸರಿ ಮಾಡಿಕೊಂಡು ಮುಂದೆ ಉಳಿದ ಊರುಗಳ ಹೆಸರುಗಳನ್ನು ಹಂತ ಹಂತವಾಗಿ ನೆಟ್ಟಗೆ ಮಾಡೋಣ.

ಕೆಲವರು ಇದು ರಾಜಕೀಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ತೆಗೆದುಕೊಂಡ ಕ್ರಮವೆಂದು ಹೇಳುತ್ತಾರೆ. ಆದರೆ ಸುವರ್ಣ ರಾಜ್ಯೋತ್ಸವದ ಈ ವರ್ಷದಲ್ಲಿ ಈ ಕ್ರಮ ಕೈಗೊಂಡಿರುವುದನ್ನು ಎಲ್ಲರೂ ರಾಜಕೀಯ ಹೊರಗಿಟ್ಟು ಸ್ವಾಗತಿಸ ಬೇಕು.

ಕರ್ನಾಟಕ ಸರ್ಕಾರಕ್ಕೆ ನಾನು ಹೇಳುವುದೇನೆಂದರೆ ಬೆಂಗಳೂರಿನ ಹೆಸರೇನೊ ನೆಟ್ಟಗೆ ಮಾಡಿದಿರಿ ಹಾಗೆಯ ಅದರ ರಸ್ತೆಗಳನ್ನು ನೆಟ್ಟಗೆ ಮಾಡಿದರೆ ಅಲ್ಲಿನ ಜನತೆ, ಅದರಲ್ಲೂ ಆ ಊರನ್ನು ತಮ್ಮದಾಗಿಸಿಕೊಂಡಿರುವ ಜನತೆಗೆ ನೆಮ್ಮದಿ ಸಿಗುತ್ತದೆ. ಕ್ಷಮಿಸಬೇಕು ಈಗಾಗಲೆ ರಸ್ತೆ ಮೂಲಭೂತ ಸೌಕರ್ಯ ಅಂತ ಕೆಲ ಪತ್ರಿಕೆಗಳು/ಮಾಧ್ಯಮಗಳು ಅವಶ್ಯಕತೆಗಿಂತ ಹೆಚ್ಚು ಗುಲ್ಲೆಬ್ಬಿಸಿರುವ ವಿಷಯವನ್ನು ಮತ್ತೆ ಎತ್ತುತ್ತಿರುವೆ. ನಮಗೆ(ಬೆಂಗಳೂರು ನಿವಾಸಿಗಳಿಗೆ) ನಮ್ಮ ಊರಿನ ಬಗ್ಗೆ ಅಭಿಮಾನವಿದೆ ಯಾರಾದರು ಬೆಂಗಳೂರಿಗೆ ಬೆರಳು ತೋರಿಸಿ ಹಿಯಾಳಿಸಿದರೆ ನಮಗೂ ದುಖಃವಾಗುತ್ತೆ. ಆದರೆ ಬೆಂಗಳೂರಿನ ರಸ್ತೆಗಳು ಹದಗೆಟ್ಟಿರುವುದೂ ಸತ್ಯ. ನಮ್ಮೆಲ್ಲರನ್ನು ನಗೆಪಾಟಲಿಗೆ ಸಿಕ್ಕಿಸಬಾರದೆಂದು ಕರ್ನಾಟಕ ಸರ್ಕಾರಕ್ಕೆ ನಾನು ಮಾಡುವ ಮನವಿ.

Comments

Anonymous said…
ಹೌದು, ನಿಮ್ಮ ಅಭಿಪ್ರಾಯವನ್ನು ಅನುಮೋದಿಸುತ್ತೇನೆ.

ಹೆಸರು ಬದಲಾಯಿಸುವುದು ಅತಿರೇಕದ ಭಾಷಾಭಿಮಾನವೇನಲ್ಲ.

ಸೂ: ಈ ಪುಟ್ಟ ಬರಹವನ್ನೊಮ್ಮೆ ಸಂಪದದಲ್ಲೂ ಹಾಕಿ ಚರ್ಚೆ ಪ್ರಾರಂಭಿಸಲಾಗುವುದೆ?
ಇರುವ ನಗರಗಳ ಹೆಸರನ್ನು ಬದಲಾಯಿಸಬೇಡಿ
ಇದ್ದುದಕ್ಕೆ ಇತಿಹಾಸವಿದೆ
ಹೊಸದೊಂದು ಇತಿಹಾಸ ನಿರ್ಮಿಸಿ ಹೊಸ ಹೆಸರಾಗಿಸಿ
ಅಥವಾ ಹೊಸದೊಂದು ನಗರ ನಿರ್ಮಿಸಿ ಅದಕ್ಕೆ ನಿಮಗೆ ಬೇಕಾದ ಹೆಸರಿಡಿ.
ಮಹಾತ್ಮ ಗಾಂಧಿಯವರ ಹೆಸರಿರುವ ರಸ್ತೆಗಳು ಪ್ರತಿಯೊಂದು ನಗರದಲ್ಲಿದ್ದರೂ ಅವರು ಹಾಕಿದ ದಾರಿಯಲ್ಲಿ ನಡೆಯುವುದು ಬಿಡಿ, ಅವರ ಹೆಸರಿನ ರಸ್ತೆಗಳನ್ನು ನಾವು ಎಂ. ಜಿ. ರೋಡ್ ಎಂದು ಕರೆದು ಅವರನ್ನೂ ಮರೆತಿದ್ದೇವೆ.
Unknown said…
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
Unknown said…
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
Anonymous said…
geLeyare,
kannaDada para chintane, charche, hot discussions ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !
Anonymous said…
geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !
Anonymous said…
ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟವನ್ನು ಬೆಂಬಲಿಸಿ
http://karave.blogspot.com/

www.karnatakarakshanavedike.org
Nagesamrat said…
ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್
Sridhar Raju said…
ನಮಸ್ಕಾರ ಚಂದ್ರಕಾಂತ್ ಅವರೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ
Anonymous said…
Hello, as you can see this is my first post here.
In first steps it is really nice if somebody supports you, so hope to meet friendly and helpful people here. Let me know if I can help you.
Thanks in advance and good luck! :)
Anonymous said…
I am able to make link exchange with HIGH pr pages on related keywords like [url=http://www.usainstantpayday.com]bad credit loans[/url] and other financial keywords.
My web page is www.usainstantpayday.com

If your page is important contact me.
please only good pages, wih PR>2 and related to financial keywords
Thanks
Inforieffof
Anonymous said…
It's so easy to choose high quality [url=http://www.euroreplicawatches.com/]replica watches[/url] online: [url=http://www.euroreplicawatches.com/mens-swiss-watches-rolex/]Rolex replica[/url], [url=http://www.euroreplicawatches.com/mens-swiss-watches-breitling/]Breitling replica[/url], Chanel replica or any other watch from the widest variety of models and brands.
Anonymous said…
This comment has been removed by a blog administrator.

Popular posts from this blog

ಮಧುವನ ಕರೆದರೆ

ಇಸ್ರೋ ಕನ್ನಡ ತಾಣ