ಮಧುವನ ಕರೆದರೆ
ಏರಡು ವಾರಗಳ ಹಿಂದಿನ ಕಥೆ. ಶನಿವಾರ. ವಾರಂತ್ಯ. ವಾರವೆಲ್ಲ ಕಷ್ಟ ಪಟ್ಟಿರುವೆ ಅಂತ ನನ್ನ ಬಗ್ಗೆ ನಾನೆ ಕನಿಕರ ತೋರಿಕೊಳ್ಳುತ್ತಾ, ಕನಿಷ್ಟ ಹತ್ತು ತಾಸು ನಿದ್ದೆ ತೆಗಿಲೇಬೇಕಂತ ಮಲಗಿದ್ದೆ. ಹಾಳದ ಕನಸುಗಳು. ರಾತ್ರಿ ೨.೩೦ಗೆ ಎಚ್ಚರವಾಯಿತು. ಎಷ್ಟು ಪ್ರಯತ್ನ ಮಾಡಿದರೂ ನಿದ್ದೆ ಇಲ್ಲ. ಇನ್ನು ಹೊರಳಾಡಿದರೆ ನನ್ನ ಹೆಂಡತ್ತಿನೂ ಎದ್ದು ಸಹಸ್ರನಾಮ ಮಾಡ್ತಾಳೆ ಅಂತ ಎದ್ದು ಲೀವಿಂಗ್ ರೂಮಿಗೆ ಬಂದೆ. ಟೀವಿ ಬೋರು. ಒಂದಿಷ್ಟು ಕನ್ನಡ ಹಾಡುಗಳನ್ನಾದರೂ ಕೇಳೋಣ ಅಂತ ಲ್ಯಾಪ್‌ಟಾಪ್ ತೋಡೆಗೇರಿಸಿ ಕಿವಿಗೆಗೆ ಹೆಡ್‌ಫೋನ್ ಸಿಗಿಸಿಕೋಂಡು ಕನ್ನಡ ಆಡಿಯೂ ತಾಣಕ್ಕೆ ಹೋದೆ. ಹಂಗೆ ಹುಡುಕ್ತಾ ಹುಡುಕ್ತಾ " ಇಂತಿ ನಿನ್ನ ಪ್ರೀತಿಯ " ಚಿತ್ರದ " ಮಧುವನ ಕರೆದರೆ " ಹಾಡು ಕೇಳಿದೆ. ಆಹಾ! ಎಂಥ ಹಾಡು. ನನಗೆ ತರತರವಾರಿ ಸಂಗೀತ ಪ್ರಾಕಾರಗಳು ಇಷ್ಟ. ಆದರೆ ಒಂದು ಒಳ್ಳೆ ಕನ್ನಡ ಹಾಡು ಕೇಳಿದಷ್ಟು ತೃಪ್ತಿ, ಸಮಧಾನ ಇನ್ನ್ಯಾವ ಹಾಡು ಕೇಳಿದ್ರೂ ಸಿಗೊಲ್ಲ. ಕಣ್ಣು ಮುಚ್ಕೊಂಡು ಜಯಂತ ಕಾಯ್ಕಣಿ ಬರೆದ ಸಾಲುಗಳನ್ನು ಚಿನ್ಮಯಿ ಧ್ವನಿಯಲ್ಲಿ ಕೇಳ್ತಾ ಎಲ್ಲೋ ಕಳೆದು ಹೋದೆ. ಸಾಧು ಕೋಕಿಲ ಎಂಥಾ ಒಳ್ಳೆ ಸಂಗೀತ ಕೊಟ್ಟಿದ್ದಾರೆ!. ಸತ್ಯ ಹೇಳಬೇಕೆಂದರೆ ಸಾಧು ಕೋಕಿಲರವರ ಸಂಗೀತದ ಬಗ್ಗೆ ನನಗೇನು ಅಷ್ಟು ಒಳ್ಳೆ ಅಭಿಪ್ರಾಯವಿರಲಿಲ್ಲ. ಆದರೆ ಈ ಹಾಡು ಕೇಳಿದ ನಂತರ ನನ್ನ ನಿಲುವು ಬದಲಾಗಿದೆ. ಈ ಹಾಡು ವಿರಳವಾಗಿ ಕಾಣಸಿಗುವ ಸಂಗೀತ ಮತ್ತು ಸಾಹಿತ್ಯದ ಹದವಾದ ಮಿಶ್