Posts

ಮಧುವನ ಕರೆದರೆ

ಏರಡು ವಾರಗಳ ಹಿಂದಿನ ಕಥೆ. ಶನಿವಾರ. ವಾರಂತ್ಯ. ವಾರವೆಲ್ಲ ಕಷ್ಟ ಪಟ್ಟಿರುವೆ ಅಂತ ನನ್ನ ಬಗ್ಗೆ ನಾನೆ ಕನಿಕರ ತೋರಿಕೊಳ್ಳುತ್ತಾ, ಕನಿಷ್ಟ ಹತ್ತು ತಾಸು ನಿದ್ದೆ ತೆಗಿಲೇಬೇಕಂತ ಮಲಗಿದ್ದೆ. ಹಾಳದ ಕನಸುಗಳು. ರಾತ್ರಿ ೨.೩೦ಗೆ ಎಚ್ಚರವಾಯಿತು. ಎಷ್ಟು ಪ್ರಯತ್ನ ಮಾಡಿದರೂ ನಿದ್ದೆ ಇಲ್ಲ. ಇನ್ನು ಹೊರಳಾಡಿದರೆ ನನ್ನ ಹೆಂಡತ್ತಿನೂ ಎದ್ದು ಸಹಸ್ರನಾಮ ಮಾಡ್ತಾಳೆ ಅಂತ ಎದ್ದು ಲೀವಿಂಗ್ ರೂಮಿಗೆ ಬಂದೆ. ಟೀವಿ ಬೋರು. ಒಂದಿಷ್ಟು ಕನ್ನಡ ಹಾಡುಗಳನ್ನಾದರೂ ಕೇಳೋಣ ಅಂತ ಲ್ಯಾಪ್‌ಟಾಪ್ ತೋಡೆಗೇರಿಸಿ ಕಿವಿಗೆಗೆ ಹೆಡ್‌ಫೋನ್ ಸಿಗಿಸಿಕೋಂಡು ಕನ್ನಡ ಆಡಿಯೂ ತಾಣಕ್ಕೆ ಹೋದೆ. ಹಂಗೆ ಹುಡುಕ್ತಾ ಹುಡುಕ್ತಾ " ಇಂತಿ ನಿನ್ನ ಪ್ರೀತಿಯ " ಚಿತ್ರದ " ಮಧುವನ ಕರೆದರೆ " ಹಾಡು ಕೇಳಿದೆ. ಆಹಾ! ಎಂಥ ಹಾಡು. ನನಗೆ ತರತರವಾರಿ ಸಂಗೀತ ಪ್ರಾಕಾರಗಳು ಇಷ್ಟ. ಆದರೆ ಒಂದು ಒಳ್ಳೆ ಕನ್ನಡ ಹಾಡು ಕೇಳಿದಷ್ಟು ತೃಪ್ತಿ, ಸಮಧಾನ ಇನ್ನ್ಯಾವ ಹಾಡು ಕೇಳಿದ್ರೂ ಸಿಗೊಲ್ಲ. ಕಣ್ಣು ಮುಚ್ಕೊಂಡು ಜಯಂತ ಕಾಯ್ಕಣಿ ಬರೆದ ಸಾಲುಗಳನ್ನು ಚಿನ್ಮಯಿ ಧ್ವನಿಯಲ್ಲಿ ಕೇಳ್ತಾ ಎಲ್ಲೋ ಕಳೆದು ಹೋದೆ. ಸಾಧು ಕೋಕಿಲ ಎಂಥಾ ಒಳ್ಳೆ ಸಂಗೀತ ಕೊಟ್ಟಿದ್ದಾರೆ!. ಸತ್ಯ ಹೇಳಬೇಕೆಂದರೆ ಸಾಧು ಕೋಕಿಲರವರ ಸಂಗೀತದ ಬಗ್ಗೆ ನನಗೇನು ಅಷ್ಟು ಒಳ್ಳೆ ಅಭಿಪ್ರಾಯವಿರಲಿಲ್ಲ. ಆದರೆ ಈ ಹಾಡು ಕೇಳಿದ ನಂತರ ನನ್ನ ನಿಲುವು ಬದಲಾಗಿದೆ. ಈ ಹಾಡು ವಿರಳವಾಗಿ ಕಾಣಸಿಗುವ ಸಂಗೀತ ಮತ್ತು ಸಾಹಿತ್ಯದ ಹದವಾದ ಮಿಶ್

ನಮ್ಮೂರು ಬೆಂಗಳೂರು

ಬ್ರಿಟೀಷ್ ಆಳ್ವಿಕೆಯಡಿ ಇಂಗ್ಲಿಷಿನಲ್ಲಿ ಬ್ಯಾಂಗಲೋರ್ ಎಂದು ಅಪಭ್ರಂಶಗೊಂಡಿದ್ದ ಬೆಂಗಳೂರು ನಗರದ ಹೆಸರನ್ನು ಸರಿಪಡಿಸುವ ನಿಟ್ಟಿನೆಡೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮ ಸರಿ ಎಂದು ನನ್ನ ಅನಿಸಿಕೆ. ಕೆಲವು ಇಂಗ್ಲಿಷ್ ಮಾಧ್ಯಮಗಳಲ್ಲಿ (ಟಿವಿ ಮತ್ತು ಪತ್ರಿಕೆ) ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದನ್ನು ಬಿತ್ತರಿಸಲಾಯಿತು. ಅಕ್ಷೇಪ ವ್ಯಕ್ತಪಡಿಸಿದವರಲ್ಲಿ ಸುಮಾರು ಜನ ಈ ನಾಡಿನಲ್ಲಿ ಹುಟ್ಟಿಬೆಳೆಯದ ಮತ್ತು ಬೆಂಗಳೂರು ಎಂದು ಸರಿಯಾಗಿ ಉಚ್ಚರಿಸಲೂ ಬಾರದ ವಲಸಿಗರು . ಇಂದಿಗೂ ಕರ್ನಾಟಕದ ಜನತೆ ಮತ್ತು ದಕ್ಷಿಣ ಭಾರತದ ಹಲವಾರು ಕನ್ನಡೇತರ ಜನರು ನಗರವನ್ನೂ ಬೆಂಗಳೂರೆಂದೇ ಸಂಭೋಧಿಸುತ್ತಾರೆ. ಬೆಂಗಳೂರಿನ ಕನ್ನಡಕಿಂತ ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುವ ಐಟಿ ಜನತೆ ಕೂಡ ಇಂಗ್ಲಿಷಿನಲ್ಲಿ ಮಾತನಾಡುವಾಗ ಬ್ಯಾಂಗಲೋರ್ ಅಂದರೂ ಕನ್ನಡದಲ್ಲಿ ಮಾತನಾಡುವಾಗ ಬೆಂಗಳೂರು ಎಂದೆ ಕರೆಯುವುದನ್ನು ಗಮನಿಸಿರುವೆ. ಕೆಲವು ಸಂಶಯವಾದಿಗಳು ಇದು ಅತಿರೇಕದ ಭಾಷಾಭಿಮಾನ (ಲಿಂಗ್ವಿಸ್ಟಿಕ್ ಶೊವನಿಸಮ್) ಎಂದು ಅರ್ಥೈಸಿಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಾನು ಹೇಳುವುದಿಷ್ಟೆ. ನಾಳೆ ಯಾರಾದರೂ ನಿಮ್ಮ ಹೆಸರನ್ನು ತಪ್ಪಾಗಿ ಉಚ್ಚರಿಸುತ್ತಿದ್ದರೆ ನೀವು ನಿಮ್ಮ ಹೆಸರನ್ನು ಅವರಿಗೆ ಸರಿಹೊಂದುವಂತೆ ಬದಲಾಯಿಸುವಿರಾ? ಸರಿಯಾದ ಉಚ್ಚರಣೆ ಮಾಡಲು ನೀವು ಕ್ರಮ ಕೈಗೊಂಡರೆ ಅದನ್ನು ಅತಿರೇಕದ ನಾಮಾಭಿಮಾನ ಎಂದರೆ ಸಹಿಸುವಿರಾ? ಬ್ಯಾಂಗಲೋರ್ ಎಂಬ ಹೆಸರು ೨೦೦ ಚಿಲ್ಲರೆ

ಇಸ್ರೋ ಕನ್ನಡ ತಾಣ

ಬಹಳ ದಿನಗಳ ನಂತರ ಮತ್ತೆ ಬರೆಯುತ್ತಿದ್ದೆನೆ. ಭವಿಷ್ಯದತ್ತ ನೋಡುತ್ತಾ, ಈ ಬಾರಿಯಿಂದ ಯುನಿಕೋಡ್ ಅಕ್ಷರಗಳ ಬಳಸಬೇಕೆಂದು ನಿರ್ಧರಿಸಿದ್ದೇನೆ. ಸುವರ್ಣ ರಾಜ್ಯೋತ್ಸವದ ಈ ವರ್ಷದಲ್ಲಿ, ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ಕನ್ನಡದಲ್ಲಿ ಒಂದು ಅಂತರ್ಜಾಲ ತಾಣ ನಿರ್ಮಿಸಿರುವುದು ಶ್ಲಾಘನೀಯ. ಈ ಅಂತರ್ಜಾಲ ತಾಣಕ್ಕೆ ಸಂಪರ್ಕಿಸುವ ಕೊಂಡಿ ಹೀಗಿದೆ. http://www.isac.ernet.in/kannada/ ಈ ತಾಣದ ಪಾರಿಭಾಷಿಕ ಶಬ್ದಕೋಶ ಮತ್ತು ಭಾರತೀಯ ಉಪಗ್ರಹಗಳ ಪರಿಚಯ(ಬಹಳ ನಿಧಾನವಾಗಿ ಪ್ರಕಟಗೊಂಡರೂ)ನನಗಿಷ್ಟವಾಯಿತು.

ಸ್ವಾಗತ

¸ÀªÀðjUÀÄ ¸ÁéUÀvÀ. F CAPÀtzÀ°è EzÀÄ £À£Àß ªÉÆzÀ® §gÀºÀ. ¤AiÀÄvÁÌ°PÀªÁV ºÉƸÀ §gÀºÀUÀ½AzÀ F CAPÀtªÀ£ÀÄß ¨É¼À¸À¨ÉÃPÉA§ §AiÀÄPÉAiÀÄ£ÀÄß ºÉÆA¢gÀĪÉ. ¸ÀzÀåPÉÌ AiÀÄĤPÉÆqï CPÀëgÀUÀ¼À£ÀÄß §¼À¸ÀzÉ (Unicode fonts) J.J¸ï.¹.¹.L.L CxÀªÁ D¹Ì CPÀëgÀUÀ¼À£ÀÄß ªÀiÁvÀæ (ASCII Fonts) §¼À¸ÀÄwzÉÝ£É. F ¤zsÁðgÀzÀ »AzÉ EgÀĪÀ ¥ÀæªÀÄÄR PÁgÀtªÉ£ÉAzÀgÉ Windows 95/ Windows 98/ Windows NT/Windows 2000 AiÀÄĤPÉÆqï CPÀëgÀUÀ¼À£ÀÄß ¥ÀæzÀ²ð¸ÀĪÀ PÀëªÀÄvÉ ºÉÆA¢®è. F CAPÀtzÀ°è £À£Àß «ZÁgÀ, ¯ÉÃR£À, C£ÀĨsÀªÀ EvÁå¢UÀ¼À£ÀÄß vÀªÉÆäA¢UÉ ºÀAaPÉƼÀî¨ÉÃPÉAzÀÄ §AiÀĹzÉÝ£É. ±ÀĨsÀ ºÁgÉʹj. If you can not read the above text, download kannada fonts from baraha website. Click here to download fonts. To Install fonts, unzip the contents of downloaded zip file to Windows fonts directory (Ex. C:\WINDOWS\Fonts)